ನಿಮ್ಮ ನೆನಪುಗಳನ್ನು ಸೆರೆಹಿಡಿಯಿರಿ

ವೃತ್ತಿಪರ ಫೋಟೋಗ್ರಾಫಿ ಸೇವೆಗಳು

ನಮ್ಮ ಸ್ಟುಡಿಯೋ ಬಗ್ಗೆ

ನಮ್ಮದು ಮಂಡ್ಯ ಜಿಲ್ಲೆಯಲ್ಲೇ ಅತ್ಯಂತ ಆಧುನಿಕ ತಂತ್ರಜ್ಞಾನ ಹೊಂದಿರುವ ನಂಬರ್ ಒನ್ ಫೋಟೋ ಸ್ಟುಡಿಯೋ. ನಾವು ಮದುವೆ (Wedding), ಪೋರ್ಟ್ರೇಟ್ ಮತ್ತು ವಿವಿಧ ಇವೆಂಟ್ ಫೋಟೋಗ್ರಾಫಿಯಲ್ಲಿ ಪರಿಣತಿಯನ್ನು ಹೊಂದಿದ್ದು, ನಿಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಅತ್ಯಂತ ಕಲಾವಂತಿಕೆಯಿಂದ ಸೆರೆಹಿಡಿಯುತ್ತೇವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಸರಿಯಾದ ಸಮಯಕ್ಕೆ ಫೋಟೋಗಳನ್ನು ತಲುಪಿಸುವುದು ನಮ್ಮ ಬದ್ಧತೆ. ಗೂಗಲ್ ರಿವ್ಯೂನಲ್ಲಿ 5-ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಮಂಡ್ಯದಲ್ಲೇ ಹೊಸ ದಾಖಲೆ ಬರೆದಿರುವ ಏಕೈಕ ಸ್ಟುಡಿಯೋ ನಮ್ಮದಾಗಿದೆ. ನಮ್ಮ ಸ್ಟುಡಿಯೋ ಮಾಲೀಕರು 'ಪ್ರಜಾವಾಣಿ' ಮತ್ತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗಳಲ್ಲಿ ಜಿಲ್ಲಾ ಛಾಯಾಗ್ರಾಹಕರಾಗಿ ಎರಡು ವರ್ಷ ಹಾಗೂ ಇವೆಂಟ್ ಫೋಟೋಗ್ರಫಿಯಲ್ಲಿ ಎಂಟು ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಇವರ ನೇತೃತ್ವದ ನುರಿತ ತಂಡವು ಅತ್ಯಾಧುನಿಕ ಉಪಕರಣಗಳೊಂದಿಗೆ ನಿಮ್ಮ ಸಂಭ್ರಮಕ್ಕೆ ಮೆರುಗು ನೀಡಲು ಸದಾ ಸಿದ್ಧವಾಗಿದೆ